ಭಾರತೀಯ ಸೈನಿಕರಿಗೆ ನೀಡುತಿದ್ದ ಅಹಹಾರ ಕಳಪೆಯ ಬಗ್ಗೆ ಮಾಡಿ ತಮ್ಮ ಅಳಲು ತೋಡಿಕೊಂಡಿದ್ದ ಬಿಎಸ್ಎಫ್ ಯೋಧ ತೇಜ್ ಬಹದ್ದೂರ್ ಯಾದವ್ ಅವರ ನೋವಿಗೆ ಕೊನೆಗೂ ಸ್ಪಂದನೆ ಸಿಕ್ಕಿದೆ.
ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿದ್ದಲ್ಲದೆ, ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಈಗ ಈ ಘಟನೆ ನಡೆದ ಬರೋಬ್ಬರಿ ಒಂದು ವರ್ಷದ ಬಳಿಕ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಆಹಾರ ತಪಾಸಣೆ ಮಾಡಿದೆ. ಇದರಲ್ಲಿ ಸೈನಿಕರಿಗೆ ಹಾಗೂ ಪ್ಯಾರಾ ಮಿಲಿಟರಿ ಫೋರ್ಸ್ಗೆ ನೀಡಬೇಕಾದ ಆಹಾರ ಪ್ರಮಾಣ ಹಾಗೂ ಗುಣಮಟ್ಟವನ್ನು ತಿಳಿಸಿದ್ದು, ಸಂಭಾವ್ಯ ನ್ಯೂನತೆಗಳನ್ನು ಸುಧಾರಿಸುವ ಕ್ರಮಗಳನ್ನು ಸೂಚಿಸಿದೆ.