ಹಣಕಾಸು ವರ್ಷ ನಾಳೆ ಅಂತ್ಯಗೊಳ್ಳಲಿರುವ ಹಿನ್ನೆಲೆಯಲ್ಲಿ ಜಿಎಸ್‍ಟಿ ತೆರಿಗೆ ಪದ್ದತಿಯಡಿ ತೆರಿಗೆ ತಪ್ಪಿಸುವವರಿಗೆ ಸರ್ಕಾರ ಈಗಾಗಲೇ ಬಲೆ ಬೀಸಿದೆ.
ಇನ್ನು ದೇಶಾದ್ಯಂತ ಮೋದಿ ಸರ್ಕಾರ ಏಕರೂಪದ ತೆರಿಗೆ ವ್ಯವಸ್ಥೆಗಾಗಿ ಜಾರಿಗೊಳಿಸಿರುವ ಸರಕುಗಳು ಮತ್ತು ಸೇವಾ ತೆರಿಗೆಗಳು(ಜಿಎಸ್‍ಟಿ) ಸುಂಕವನ್ನು ಪಾವತಿಸದೇ ಹಲವಾರು ಖದೀಮರು ಸರ್ಕಾರಕ್ಕೆ ವಂಚಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ.
ಇನ್ನು ಈಗಾಗಲೇ ಇಂತಹ ಖದೀಮರ ವಿರುದ್ಧ ಸರ್ಕಾರ ಕಾರ್ಯಾಚರಣೆ ಕೈಗೊಂಡಿದ್ದು, ಸಿಕ್ಕಿಬಿದ್ದವರಿಗೆ ಸರಿಯಾದ ಶಾಸ್ತಿಯಾಗುವುದೊಂತು ಕಂಡಿತವಾಗಿದೆ.